Emblem

ಇಸ್ಪೇಟ್ ಜೂಜಾಟ ದಾಳಿ.

ದಿನಾಂಕ:26-07-2020 ರಂದು ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಾ-ಸಿಂದನೂರ ರಸ್ತೆ ಅಶೋಕ ಓದಾರವರ ಹೊಲದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ 7 ಜನ ಆರೋಪಿತರು ಇಸ್ಪೀಟ್ ಜೂಜಾಟ ಆಡುತ್ತಿದ್ದ ಕಾಲಕ್ಕೆ ಶ್ರೀ ಗೀತಾಂಜಲಿ ಶಿಂಧೇ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 13,070=00 ರೂ. ಹಾಗೂ ಇಸ್ಪೇಟ್ ಜೂಜಾಟದ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ: 26-07-2020 ರಂದು ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯ ಮುದ್ಲಾಪೂರ ಗ್ರಾಮದ ಹಿರೇಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 10 ಜನ ಆರೋಪಿತರು ದುಂಡಾಗಿ ಕುಳಿತು ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂಭವ ಇರುತ್ತದೆ ಅಂತಾ ಗೊತ್ತಿದ್ದರು ಸಹ ನಿರ್ಲಕ್ಷ್ಯತನದಿಂದಾ ಗುಂಪು ಕಟ್ಟಿಕೊಂಡು ಅಂದರ-ಬಾಹರ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಸುರೇಶ. ಡಿ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಯವರಿ ಹೋಗಿ ದಾಳಿ ಮಾಡಿ ಅವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ, 15,420=00 ರೂ. & ಇಸ್ಪೇಟ್ ಇತರೇ ಸಾಮಗ್ರಿಗಳನ್ನು ಹಾಗೂ ಸಿಕ್ಕ 10 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ: 26-07-2020 ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಷ್ಟಗಿ-ತಾವರಗೇರಾ ರಸ್ತೆಯ ಮಾರುತಿ ಡಾಬಾದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ಖಚಿತವಾದ ಭಾತ್ಮಿ ಬಂದಿದ್ದು ಶ್ರೀ ಚಂದ್ರಶೇಖರ ಜಿ. ಸಿ.ಪಿ.ಐ. ಕುಷ್ಟಗಿ ವೃತ್ತರವರು ಹಾಗೂ ಸಿಬ್ಬಂದಿಯವರು ಹೋಗಿ ರೇಡ್ ಮಾಡಿದಾಗ 07 ಜನ ಆರೋಪಿತರು ಮಾನವ ಜೀವಕ್ಕೆ ಅಪಾಯಕಾರಿಯಾದ ಕೊರೋನ ವೈರಸ್ ಸೊಂಕು ಹರಡುತ್ತಿರುವುದರಿಂದ ಅದನ್ನು ತಡೆಗಟ್ಟುವ ಕುರಿತು 05 ಕ್ಕಿಂತ ಹೆಚ್ಚು ಜನರು ಗುಂಪುಗೂಡದಂತೆ ಆದೇಶಿಸಿದ್ದರೂ ಸಹ ಆರೋಪಿತರು ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿ ಒಟ್ಟುಗೂಡಿ ಅಪಾಯಕಾರಿಯಾದ ಕೊರೋನ ವೈರಸ್ ಸೊಂಕು ಹರಡುವ ಸಂಭವವಿರುವುದೆಂದು ತಿಳಿದಿದ್ದೂ ನಿರ್ಲಕ್ಷ್ಯತನ ತೋರಿಸಿದ್ದು ಅವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟದ ನಗದು ಹಣ 82100-00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳು, ಹಾಗೂ ಹಳೆಯ ನ್ಯೂಸ್ ಪೇಪರನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

449405